ನಗರದ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಯಾತಲಾಬ್ ನಿವಾಸಿಯಾದ ಮೆಹರುನ್ನೀಸಾ ಬೇಗಂ ಗಂಡ ಮಹೆಬೂಬ್ ವಯಸ್ಸು (39) ಎಂಬ ಮಹಿಳೆಯು ಜೂನ್ 26ರ ರಾತ್ರಿ 8ಕ್ಕೆ ಮನೆಯಿಂದ ಹೊರಗಡೆ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಸದರ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ತಲೆಯಲ್ಲಿ ಕಪ್ಪು ಕೂದಲು, 4.6 ಅಡಿ ಎತ್ತರ ಹೊಂದಿದ್ದು, ಕನ್ನಡ, ಉರ್ದು ಹಾಗೂ ಹಿಂದಿ ಭಾಷೆ ಮಾತನಾಡುತ್ತಾಳೆ. ಈ ಮಹಿಳೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಸದರ ಬಜಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಠಾಣೆ ಅಧಿಕಾರಿಗಳು ಆಗಸ್ಟ್ 25 ರ ಸಂಜೆ ಪ್ರಕಟಣೆಯಲ್ಲಿ ಕೋರಿದ್ದಾರೆ.