ಗೌರಿಬಿದನೂರಿಗೆ ನೀರಿಗಾಗಿ ಇಂದು ಏಕೆಆರ್ ಎಸ್,ಕರವೇ ಸಂಘಟನೆಗಳ ವತಿಯಿಂದ ಬೈಕ್ ಜಾಥಾ ನಡೆಸಿ ಸರ್ಕಾರವನ್ನು ಇಂದ ಒತ್ತಾಯಿಸಲಾಯಿತು. ಈ ವೇಳೆ ಮಾಜಿ ಕೃಷಿ ಸಚಿವ ಎನ್ ಹೆಚ್ ಶಿವಶಂಕರ್ ರೆಡ್ಡಿಯವರು ಮಾತನಾಡಿ, ನಾಗರೀಕರಿಗೆ ನೀರನ್ನು ಒದಗಿಸುವುದು ಸರಕಾರಗಳ ಜವಬ್ದಾರಿ. ಗೌರಿಬಿದನೂರು ನಗರಕ್ಕೆ ನೀರನ್ನು ದ್ಯಾವಪ್ಪನ ಕೆರೆ ಸಮೀಪ ಡ್ಯಾಮ್ ನಿರ್ಮಾಣ ಮಾಡಿ, ನೀರು ಒದಗಿಸಬೇಕು.ಆದರೆ ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ತರಲು ಅವೈಜ್ಞಾನಿಕ ರೀತಿಯಲ್ಲಿ ಚಿಂತನೆ ಮಾಡಿದ್ದು, ಆ ಕೆರೆ ಸಂಪೂರ್ಣವಾಗಿ ಒಣಗಿ ಹೋಗುತ್ತದೆ. ಒಂದು ವೇಳೆ ಆ ಕೆರೆ ನೀರನ್ನು ತರಲು ಪೈಪ್ ಲೈನ್ ಕಾಮಗಾರಿ ನಡೆಸಿದರೆ, ನಾನು ಬಂದು ನಿಲ್ಲಿಸುತ್ತೇನೆ ಎಂದು ಶಾಸಕ ಕೆ ಹೆಚ್ ಪುಟ್ಟಸ್ವಾಮಿಗೌಡರಿಗೆ ಮಾಜಿ ಸಚಿವರು ನೇರವಾಗಿ ಎಚ್ಚರಿಕೆ ಕೊಟ್ಟರು.