ಮಳವಳ್ಳಿ : ಓಟಿಗಾಗಿ ಒಂದು ಧರ್ಮದವರನ್ನು ಓಲೈಕೆ ಮಾಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಬಹು ಸಂಖ್ಯಾತ ಹಿಂದೂ ಗಳನ್ನು ಕೀಳಾಗಿ ಕಾಣುತ್ತಿದೆ ಎಂದು ಮಾಜಿ ಶಾಸಕ ಡಾ. ಕೆ ಅನ್ನದಾನಿ ಆರೋಪಿಸಿದ್ದಾರೆ. ಮದ್ದೂರು ಪಟ್ಟಣದಲ್ಲಿ ಗಣೇಶ ಉತ್ಸವದ ವೇಳೆ ನಡೆದ ಘಟನೆ ಖಂಡಿಸಿ ಎನ್ ಡಿ ಎ ಮೈತ್ರಿ ಕೂಟ ಹಾಗೂ ಹಿಂದೂಪರ ಸಂಘಟನೆ ಗಳು ಕರೆ ನೀಡಿದ್ದ ಮಳವಳ್ಳಿ ಬಂದ್ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಪೇಟೆ ವೃತ್ತದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಂಜಾನ್ , ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಹಿಂದೂಗಳು ಕಲ್ಲು ಹೊಡೆದಿಲ್ಲ ಆದರೆ ಗಣೇಶ ಹಬ್ಬದ ಉತ್ಸವಕ್ಕೆ ಕಲ್ಲು ಹೊಡೆದಿರುವ ಅನ್ಯ ಧರ್ಮಿಯರ ಕೃತ್ಯ ಅತ್ಯಂತ ಖಂಡನೀಯ ಎಂದರು.