ಕಲಬುರಗಿ : ಪ್ರಧಾನಿ ನರೇಂದ್ರ ಮೋದಿಗೆ ಅಹಂಕಾರ ಜಾಸ್ತಿಯಾಗಿದೆ.. ಅವರ ಅಹಂಕಾರ ಅವರನ್ನೆ ತಿನ್ನುತ್ತೆ ಅಂತಾ ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.. ಸೆ7 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮ ಸಲಹೆ ಸೂಚನೆಗಳನ್ನ ನೇಗ್ಲೆಟ್ ಮಾಡುತ್ತೆ.. ಅದಕ್ಕೆ ನಾನು ಜಾಸ್ತಿ ಏನು ಹೇಳಲ್ಲ ಹೇಳಿದ್ರೆ ತಪ್ಪಾಗುತ್ತೆ ಅಂತಾ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.. ಇನ್ನೂ ಇದೇ ವೇಳೆ ಕೇಂದ್ರದ ಜಿಎಸ್‌ಟಿ ಕಡಿತ ನಿರ್ಧಾರವನ್ನ ಖರ್ಗೆ ಸ್ವಾಗತಿಸಿದ್ದು, ಯಾವ ಕಾರಣಕ್ಕೆ ಜಿಎಸ್‌ಟಿ ಕಡಿತ ಮಾಡಿದಾರೋ ಗೋತ್ತಿಲ್ಲ.. ಆದರೆ ಇದರಿಂದ ಬಡವರಿಗೆ ಅನುಕೂಲವಾಗಿದೆ ಅಂತಾ ಖರ್ಗೆಯವರು ಹೇಳಿದ್ದಾರೆ.