ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಾಲರ್ಸ್ ಕಾಲೋನಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು, ಧರ್ಮಸ್ಥಳದಲ್ಲಿ ವಿರುದ್ದ ಧ್ವನಿ ಅಡಕವಾಗಿತ್ತು. ಧರ್ಮಸ್ಥಳಕ್ಕೆ ವಿರುದ್ದವಾದ ಬಹುತೇಕ ಮಂದಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಧರ್ಮಸ್ಥಳದ ವಿರುದ್ದದ ಪಿತೂರಿ ಪೈಪೋಟಿಗೆ ಹೋಗಿ ಈ ಹಂತಕ್ಕೆ ಬಂದಿದೆ ಮಾನಸಿಕವಾಗಿ ಕಿರುಕುಳ ಕೊಡುವ ಕೆಲಸ ಮಾಡಿದರು. ಜಾತ್ಯಾತೀತ, ಧರ್ಮಾತೀತವಾಗಿ ಮಂಜುನಾಥೇಶ್ವರನ ಬಗ್ಗೆ ಭಕ್ತಿ ಗೌರವ ಇದೆ. ಅಲ್ಲಿ ಸ್ಥಳೀಯವಾಗಿ ರಾಜಕೀಯವಾಗಿ ಬೆರೆತಿದೆ ಎಂದರು.