ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ರದ್ದಗೊಳಿಸಿದ್ದು ಮೇಲ್ಮನವಿ ಸಲ್ಲಿಸಲು ದರ್ಶನ್ ಗೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.ತುಮಕೂರು ನಗರ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಧ್ಯಾಹ್ನ 12.45 ರ ಸಮಯದಲ್ಲಿ ಮಾತನಾಡಿದರು. ಧರ್ಮಸ್ಥಳದಲ್ಲಿ ಹೂತಿರುವ ಶವ ಶೋಧ ಕಾರ್ಯದ ಮಧ್ಯಂತರ ವರದಿಯನ್ನ ಎಸ್ ಐ ಟಿ ನೀಡಿಲ್ಲ ಅವರಿಗೆ ವಹಿಸಿರುವ ಜವಾಬ್ದಾರಿ ಬಳಿಕ ಅವರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಅದನ್ನ ಸ್ವೀಕರಿಸುವುದು ಅಥವಾ ತಿರಸ್ಕಾರ ಮಾಡುವುದು ಸಚಿವ ಸಂಪುಟದ ತೀರ್ಮಾನ ಆಗಿರುತ್ತದೆ ಎಂದರು.