Download Now Banner

This browser does not support the video element.

ಚಿತ್ರದುರ್ಗ: ಗಣೇಶನ ಮೆರವಣಿಗೆ ವೇಳೆ ಕಲರ್ ಬ್ಲಾಸ್ಟಿಂಗ್ ಮತ್ತು ಪಟಾಕಿ ಬಳಕೆ ಹಿನ್ನೆಲೆ ಹೊಸದುರ್ಗ ಪಟ್ಟಣದಲ್ಲಿ ಪ್ರಖರಣ, ನಗರದಲ್ಲಿ ಎಸ್ಪಿ ಪ್ರಕಟಣೆ

Chitradurga, Chitradurga | Sep 9, 2025
ಗಣೇಶನ ಮೆರವಣಿಗೆ ವೇಳೆ ಕಲರ್ ಬ್ಲಾಸ್ಟಿಂಗ್ ಮತ್ತು ಪಟಾಕಿ ಸಿಡಿಸಿದ್ದ ಹಿನ್ನೆಲೆ ಹೊಸದುರ್ಗ ಹಿಂದೂ ಮಹಾಸಾಗರ ಗಣಪತಿಯ ಸಂಘಟಕರ ಮೇಲೆ ಪ್ರಖರಣ ಧಾಖಲಾಗಿದೆ. ಸೆಪ್ಟೆಂಬರ್ 8 ರಂದು ಹೊಸದುರ್ಗ ಪಟ್ಟಣದಲ್ಲಿ ಹಿಂದೂ ಮಹಾಸಾಗರ ಗಣಪತಿಯ ಮೆರವಣಿಗೆ ವೇಳೆ ಮಧ್ಯಾಹ್ನ 3.30 ರ ಸಮಯದಲ್ಲಿ ಕಲರ್ ಬ್ಲಾಸ್ಟಿಂಗ್ ಹಾಗೂ ರಾತ್ರಿ 8 ಗಂಟೆಗೆ ಪಟಾಕಿ ಹಾಗೂ ಸಿಡಿಮದ್ದುಗಳನ್ನ ಬಳಸಿದ್ದು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಕಂಡು ಬಂದಿದೆ. ಈ ಘಟನೆ ಅಡಿಯಲ್ಲಿ ಹಿಂದೂ ಮಹಾ ಸಾಗರ ಗಣಪತಿ ಸಂಘಟನೆಯ ಅಧ್ಯಕ್ಷರಾದ ಪ್ರದೀಪ್, ಹಾಗೂ ಮೆರವಣಿಗೆ ಮುಂದಾಳತ್ವ ವಹಿಸಿದ್ದ ಶಿವರಾಜ್ ಕುಮಾರ್ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದೆ
Read More News
T & CPrivacy PolicyContact Us