ರೈತರ ಜಮೀನನ್ನ ಭೂಸ್ವಾಧೀನ ಮಾಡಿಕೊಳ್ಳುವ ಸಂಬಂಧ ಸಚಿವರಾಗಲಿ,ಶಾಸಕರಾಗಲಿ ಯಾರು ರೈತರ ಸಭೆಗಳನ್ನ ಮಾಡಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಪ್ರಶ್ನೆ ಮಾಡಿದರು. ಬಿಡದಿಯ ಮಾಜಿ ಶಾಸಕರ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಈ ಪ್ರಾಧಿಕಾರಕ್ಕೆ ಸಿಎಂ ಅಥವಾ ಹಿರಿಯ ಐಎಎಸ್ ಅಧಿಕಾರಿಯನ್ನ ಚೇರ್ಮನ್ ಮಾಡಬೇಕು ಆದರೆ ಇವರು ಒಬ್ಬ ಕಾರ್ಯಕರ್ತನನ್ನ ಅಧ್ಯಕ್ಷ ಎಂದು ಮಾಡಿಕೊಂಡಿದ್ದಾರೆ ಎಂದರು.