ಸಾರ್ವಜನಿಕರಿಗೆ ಅಗತ್ಯವಿರುವ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಒತ್ತಾಯಿಸಿ ಅಂತರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯು ಜಾಥಾ ನಡೆಸಿತು. ಪಟ್ಟಣದ ಸುರಭಿ ವೃತ್ತದಿಂದ ಪ್ರಾರಂಭವಾದ ಜಾಥ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಕೆ.ಎಸ್.ಆರ್ ಟಿ.ಸಿ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ ನಂತರ ಊಟಿ ಸರ್ಕಲ್ ಮಾರ್ಗವಾಗಿ ಐಬಿ ವೃತ್ತದಿಂದ ಸಾಗಿ ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಜಮಾಯಿಸಿ, ಗುಂಡ್ಲುಪೇಟೆಗೆ ಪ್ರಾಥಮಿಕವಾಗಿ ಅವಶ್ಯಕತೆ ಇರುವ ಸೌಲಭ್ಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಸಂಚಾರ ಸುಗಮವಾಗಲು ಸಿಗ್ನಲ್ ಲೈಟ್ ಬಳಕೆಯಾಗಬೇಕು ಸೇರಿ ವಿವಿಧ ಹಕ್ಕೊತ್ತಾಯ ಸಲ್ಲಿಸಿದರು.