ಹೆಸ್ಕಾಂ ಅಧಿಕಾರಿಯನ್ನು ಮಹಾನಗರ ಪಾಲಿಕೆಯ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಸಂಭವಿಸಿದೆ. ವಿಜಯಪುರ ನಗರದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಬುಧವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಜರುಗಿತು. ಹೆಸ್ಕಾಂ ಅಧಿಕಾರಿಗಳ ಬೇಜ್ವಾಬ್ದಾರಿತನದಿಂದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿದ್ಯುತ್ ತಗಲಿ ಶುಭಂ ಎಂಬ ಯುವಕ ಸಾವನಪ್ಪಿದ್ದಾನೆ, ಗಣೇಶ ಉತ್ಸವ ಹಿನ್ನೆಲೆ ವಿದ್ಯುತ್ ತೊಂದರೆ ಆಗದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಯಿತು, ಆ ಸಂದರ್ಭದಲ್ಲಿ ಸೂಚನೆಯಂತೆ ಕ್ರಮ ತೆಗೆದುಕೊಳ್ಳಬೇಕಾಗಿತ್ತು ಆದರೆ ಹೆಸ್ಕಾಂ ಬೇಜ್ವಾಬ್ದಾರಿತನದಿಂದ ಅನಾಹುತ ಸಂಧಿಸಿದೆ ಎಂದು ಪಾಲಿಕೆ ಸದಸ್ಯರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.