ಪಾಲವ್ವನಹಳ್ಳಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಪುಟಾಣಿ ಮಕ್ಕಳಿಂದ ಭಾವೈಕ್ಯತೆಯ ಪ್ರತೀಕವಾಗಿ ಗಣೇಶ ಪ್ರತಿಷ್ಟಾಪನೆ ಮಾಡಿದ್ದು ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು. ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಪುಟಾಣಿ ಮಕ್ಕಳು ಕಳೆದ ಮೂರು ವರ್ಷಗಳಿಂದ ಭಾವೈಕ್ಯತೆಯಿಂದ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬಂದಿದ್ದು ಹಿಂದೂ ಮುಸ್ಲಿಂ ರು ಸೌಹಾರ್ಧತೆಯಿಂದ ಐದು ದಿನವೂ ಕೂಡ ಗಣೇಶನಿಗೆ ಪೂಜೆ ಸಲ್ಲಿಸಿಕೊಂಡು ಬಂದಿದ್ದು ಐದನೇ ದಿನವಾದ ಬಾನುವಾರ ಸಂಜೆ 6.30 ಕ್ಕೆ ಗಣೇಶನ ವಿಸರ್ಜನೆಯನ್ನ ಹಿಂದೂ ಮುಸ್ಲಿಂ ಸಮುದಾಯದ ಪುಟಾಣಿ ಮಕ್ಕಳೆಲ್ಲ ಒಟ್ಟಾಗಿ ಸೇರಿ ಸೌಹಾರ್ಧತೆಯಿಂದ ಗಣೇಶನನ್ನ ವಿಸರ್ಜನೆ ಮಾಡಿದ್ದಾರೆ.