ಗೌರಿಬಿದನೂರು ತಾಲ್ಲೂಕು ಕೇಂದ್ರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಆಸ್ಪತ್ರೆಯೊಳಗೆ ಕರೆಂಟ್ ಇಲ್ಲದೆ ಚಿಕಿತ್ಸೆ ಪಡೆಯಲು ಬಂದಿರುವ ಗರ್ಭಿಣಿಯರು, ಹೆರಿಗೆಗೆ ಬಂದಿರುವ ಮಹಿಳೆಯರು ಹಾಗೂ ನವಜಾತ ಶಿಶುಗಳು ನರಳುವಂತಾಗಿದೆ. ಆರೋಗ್ಯ ಕೇಂದ್ರವೆಂಬ ಹೆಸರಿದ್ದರೂ ಇಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಸಾಮಾನ್ಯ ಜನರ ಜೀವವನ್ನು ಅಪಾಯದ ಅಂಚಿಗೆ ತಳ್ಳುತ್ತಿದೆ ದೃಶ್ಯಗಳು ಸೋಮವಾರ ರಾತ್ರಿ ಸಮಯದಲ್ಲಿ ಕಂಡುಬಂದಿದೆ.