ಕೊಪ್ಪಳ ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಪಕ್ಷದ ಕಾರ್ಯಲಯದಲ್ಲಿ ಸೇವಾ ಪಕ್ಷಿಕ ಕಾರ್ಯಗಾರ ಕಾರ್ಯಕ್ರಮ ನಡೆಯಿತು. ಸೆಪ್ಟೆಂಬರ್10 ರಂದು ಮಧ್ಯಾಹ್ನ 3-30 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಬಿಜೆಪಿ ಪಕ್ಷದ ವಿವಿಧ ಮೊರ್ಚಾದ ಪದಾಧಿಕಾರಿಗಳು ಭಾಗವಹಿಸಿದ್ದರು. ಸೇವಾ ಪಾಕ್ಷಿಕ ಕಾರ್ಯದ ಮಹತ್ವ ಕುರಿತು ಹಲವರು ಮಾತನಾಡಿ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು