ಅಭಿವೃದ್ಧಿ ಕಾಣದ ಗ್ರಾಮ. ಗ್ರಾಮದಲ್ಲಿ ರಸ್ತೆ ಚರಂಡಿ ಸೇರಿ ಮೂಲ ಸೌಕರ್ಯಗಳ ಕೊರತೆ. ರಸ್ತೆ ಅಭಿವೃದ್ಧಿ ಮಾಡುವ ತನಕ ಚುನಾವಣೆಯಲ್ಲಿ ಮತಚಲಾಯಿಸಲ್ಲ. ಹೆಮ್ಮರಗಾಲ ಗ್ರಾಮಸ್ಥರ ಆಕ್ರೋಶ. ಸಂಪೂರ್ಣ ಕೆಸರುಮಯವಾದ ಗ್ರಾಮದ ರಸ್ತೆ. ಅನೈರ್ಮಲ್ಯ ಚರಂಡಿ ವ್ಯವಸ್ಥೆ. ಸ್ವತಂತ್ರ್ಯ ಬಂದು 75 ವರ್ಷ ಕಳೆದರು ಅಭಿವೃದ್ಧಿ ಕಾಣದ ಗ್ರಾಮ. ಗ್ರಾಮದತ್ತ ತಿರುಗಿಯೂ ನೋಡದ ಶಾಸಕ ದರ್ಶನ್ ಧ್ರುವನಾರಾಯಣ್. ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದ ದುಸ್ಥಿತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ತವರು ಜಿಲ್ಲೆಯ ನಂಜನಗೂಡು ವಿಧಾನಸಭಾ ಕ್ಷೇತ್ರದ ಹೆಮ್ಮರಗಾಲ ಗ್ರಾಮ. ಗ್ರಾಮದ ಮುಖ್ಯ ರಸ್ತೆಯಲ್ಲ ಕೆಸರು ಮಯ. ಚರಂಡಿಗಳು ತುಂಬಿ ಗಬ್ಬೆದ್ದು ನಾರುತ್ತಿವೆ. ಮಳೆ ಬಂದರಂತೂ ಗ್ರಾಮದ ಪಾಡು ಹೇಳತೀರದು.