ಚಿತ್ರದುರ್ಗ:ನಿಮ್ಮ ಕಣ್ಣುಗಳನ್ನು ಅಗ್ನಿ ಸ್ಪರ್ಶ ಮಾಡಬೇಡಿ. ಮರಣ ನಂತರ ಕಣ್ಣುಗಳನ್ನು ದಾನ ಮಾಡಿ “ನೇತ್ರದಾನ ಮಹಾದಾನ” ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ ಗಿರೀಶ್ ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಮರಣ ನಂತರ ನಾವು ಎರಡು ಕಣ್ಣುಗಳನ್ನು ದಾನ ಮಾಡಿದರೆ ಅಂಧರಿಬ್ಬರಿಗೆ ಜಗತ್ತನ್ನು ನೋಡುವ ಅವಕಾಶ ಸಿಕ್ಕಂತಾಗುತ್ತದೆ. ಯಾವುದೇ ವಯಸ್ಸಿನವರು ಸಹ ದಾನ ಮಾಡಬಹುದು ಎಂದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿದರು.