Download Now Banner

This browser does not support the video element.

ರಾಯಚೂರು: ಶ್ರೀನಿವಾಸ ಕ್ಯಾಂಪಿನಲ್ಲಿ ರಸ್ತೆ ಬದಿ ಹೋಗುತ್ತಿದ್ದ ವ್ಯಕ್ತಿಗೆ ಗುದ್ದಿದ ಬೈಕ್ ಸವಾರ; ಇಬ್ಬರಿಗೆ ಗಾಯ

Raichur, Raichur | Sep 9, 2025
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಸವಾರ ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ರಾಯಚೂರು ತಾಲೂಕಿನ ಶ್ರೀನಿವಾಸ ಕ್ಯಾಂಪಿನಲ್ಲಿ ಸೆ.8 ರ ಸೋಮವಾರ ರಾತ್ರಿ ಏಳು ಗಂಟೆಗೆ ಸಂಭವಿಸಿದೆ. ಗೋನಾಳ ಬ್ರಿಡ್ಜ್ ನಿಂದ ಶ್ರೀನಿವಾಸ ಕ್ಯಾಂಪ್ ಕಡೆಗೆ ನಡೆದುಹೋಗುತ್ತಿದ್ದ ಯಂಕಣ್ಣ ( 35) ಎಂಬಾತನಿಗೆ ಬೈಕ್ ಸವಾರ ಜಂಬಣ್ಣ (22) ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಇಬ್ಬರೂ ನೆಲಕ್ಕೆ ಬಿದ್ದು ಗಾಯಗಳಾದ ಘಟನೆ ನಡೆದಿದೆ. ಪುನಃ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More News
T & CPrivacy PolicyContact Us