ಹೆಚ್. ಕಲಪನಹಳ್ಳಿ ಬಳಿ ಹೈವೇ ರಸ್ತೆಯಲ್ಲಿ ಬೈಕ್ ಚಾಲಕನಿಗೆ ಅಡ್ಡಗಟ್ಟಿ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡು ಹೋಗಿದ್ದ ಇಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬೈಲಹೊಂಗಲ ತಾಲ್ಲೂಕಿನ ಕೊಪ್ಪ ಗ್ರಾಮದ ಬಸಯ್ಯ ಸೋಮಯ್ಯ ತಮ್ಮ ಗ್ರಾಮದಿಂದ ಬೈಕಿನಲ್ಲಿ ಬೆಂಗಳೂರಿಗೆ ಹೋಗುವ ಸಮಯದಲ್ಲಿ ಹೆಚ್.ಕಲಪನಹಳ್ಳಿ ಹತ್ತಿರ ಹೈ ವೇ ರಸ್ತೆಯಲ್ಲಿ ಇಬ್ಬರು ಹುಡುಗರು ಒಂದು ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ ಹಲ್ಲೆ ಮಾಡಿ 18 ಸಾವಿರ ರೂ. ಮೌಲ್ಯದ ಮೊಬೈಲ್ ಮತ್ತು ಬೈಕಿನ ಕೀ ಯನ್ನು ಕಿತ್ತುಕೊಂಡು ಹೋಗಿದ್ದರು. ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಕಬ್ಬೂರು ಬಸಪ್ಪ ನಗರದ ಪಿ. ಆಕಾಶ(19), ಮತ್ತು ಬಾಲಕನನ್ನು ವಶಕ್ಕೆ ಪಡೆದು ಬೈಕ್ ಮತ್ತು ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ.