ಅಂಧರ ಬಾಳಿನ ಆಶಾಕಿರಣ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು ಅಂತಃಕರಣ ಸೇವಾ ಮನೋಭಾವನೆ ಎಲ್ಲರ ಮನದಲ್ಲಿ ಸದಾ ಇರಲಿದೆ ಎಂದು ಸಿದ್ಧಲಿಂಗೇಶ್ವರ ಕಲ್ಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ತಾಲೂಕಿನ ತೊಂಡೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪುಟ್ಟರಾಜ ಗವಾಯಿಗಳವರ 15ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.