ಚಿಕ್ಕಬಳ್ಳಾಪುರ ಜಿಲ್ಲೆಯ ಬಹು ನಿರೀಕ್ಷಿತ ಗೌರಿಬಿದನೂರು ಬೈಪಾಸ್ ಗಣೇಶೋತ್ಸವಕ್ಕೆ ಇನ್ನು ಕೆಲವೇ ಗಂಟೆಗಳೇ ಬಾಕಿ ಇದ್ದು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಗರದ ವಿನಾಯಕ ಸರ್ಕಲ್ ಬಳಿಯ ಬೈಪಾಸ್ ನಲ್ಲಿ 22 ಅಡಿ ಎತ್ತರದ ಪ್ರಣವ ರುದ್ರ ಮಹಾಗಣಪತಿ ಮೂರ್ತಿಯನ್ನು ಪವಿತ್ರ ಗಂಗಾ ನದಿಯ ಮಣ್ಣಿನಿಂದ ತಯಾರಿಸಿದ್ದು ಇದಕ್ಕೆ ಕಲ್ಕತ್ತಾ ಮೂಲದ ನುರಿತ ಶಿಲ್ಪಿಗಳು ಹಾಗೂ ಕಲಾಕಾರರು ಸ್ಥಳದಲ್ಲೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 19 ದಿನಗಳ ಕಾಲ ಶ್ರದ್ಧ ಭಕ್ತಿಯಿಂದ ಗಣೇಶೋತ್ಸವವನ್ನು ಸಮಿತಿ ಕಡೆಯಿಂದ ಆಚರಿಸಲಾಗುತ್ತದೆ.