ಚಿತ್ರದುರ್ಗ, ಆಗಸ್ಟ್. 21 : ಭೀಕರವಾಗಿ ಹತ್ಯೆಗೀಡಾಗಿರುವ ವಿದ್ಯಾರ್ಥಿನಿ ವರ್ಷಿತಾಳ ಆತ್ಮಕ್ಕೆ ಶಾಂತಿ ಕೋರಿ ಮುಸ್ಲಿಂ ಸಮಾಜದ ಯುವಕರು ಗುರುವಾರ ಸಂಜೆ ನಗರದಲ್ಲಿ ಕ್ಯಾಂಡಲ್ ಮೆರವಣಿಗೆ ನಡೆಸಿದರು. ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿದ ಯುವಕರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಹಾಗೂ ಒನಕೆ ಓಬವ್ವ ವೃತ್ತದ ಬಳಿ ಅತ್ಯಾಚಾರಿ ವಿರುದ್ದ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ವರ್ಷಿತಾಳನ್ನು ಬರ್ಬರವಾಗಿ ಕೊಲೆಗೈದು ದೇಹವನ್ನು ಸುಟ್ಟು ಹಾಕಿರುವವರು ಯಾರೆ ಆಗಿರಲಿ ಕಠಿಣ ಶಿಕ್ಷೆ ವಿಧಿಸಬೇಕು. ಇದರ