ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ ಏಕಶಿಲಾ ಬೃಂದಾವನ ಇದೆ. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ, ರಾಯರ ದರ್ಶನ ಪಡೆಯುತ್ತಾರೆ. ರಾಜ್ಯ ಮತ್ತು ಅನ್ಯರಾಜ್ಯದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ತುಂಗಭದ್ರ ನದಿ ತೀರದಲ್ಲಿರುವ ಐತಿಹಾಸಿಕ ಧಾರ್ಮಿಕ ಕೇಂದ್ರಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ಏಕಶಿಲಾ ಬೃಂದಾವನಕ್ಕೆ ಬರುವ ಭಕ್ತರು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತುಮಕೂರು ಜಿಲ್ಲೆಯ ತುರುವೇಕೆರೆ ಗ್ರಾಮದ ಸಿದ್ದನಗೌಡ ಅವರು ತಾಲೂಕು ಪಂಚಾಯತಿ ಅಧಿಕಾರಿಗೆ ಇತ್ತೀಚೆಗೆ ದೂರು ಸಲ್ಲಿಸಿದ್ದಾರೆ. ಕೂಡಲೇ ದೇಗುಲಕ್ಕೆ ರಸ್ತೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರಾದ ವಿಶ್ವನಾಥ ಸೆ.5 ರಂದು ಪಬ್ಲಿಕ್ ಆಪ್ ಜೊತೆ ಮಾತನಾಡಿ ಒತ್ತಾ