ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ದ ಜಾತ್ಯತೀತ ಜನತಾದಳವು ಧರ್ಮಸ್ಥಳ ಸತ್ಯ ಯಾತ್ರೆ ಕೈಗೊಂಡಿದ್ದು, ಆ.31ರಂದು ಹಾವೇರಿ ಜಿಲ್ಲೆಯಿಂದಲೂ ಪಕ್ಷದ ಕಾರ್ಯಕರ್ತರು ನೇತ್ರಾವತಿ ನದಿಯಿಂದ ಧರ್ಮ ಸ್ಥಳವರೆಗೆ ಪಾದಯಾತ್ರೆ . ನಡೆಸಲಿದ್ದೇವೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣವರ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷನಿಖಿಲ್ ಧ್ಯಕ್ಷನಿಖಿಲ್ ಕುಮಾರಸ್ವಾಮಿ ಕುಮಾರ ನೇತೃತ್ವದಲ್ಲಿ ಆ.31 ರಂದು ಧರ್ಮಸ್ಥಳ ಸತ್ಯ ಯಾತ್ರೆ ಆರಂಭವಾಗುತ್ತದೆ. ಹಾವೇರಿ ಜಿಲ್ಲೆಯಿಂದಲೂ ಅಂದು ಬೆಳಗ್ಗೆ 6ಕ್ಕೆ ಕನಿಷ್ಠ 40-50 ಕಾರುಗಳು ಹೊರಡಲಿವೆ ಎಂದರು.