ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಉತ್ಪತ್ತಿಯಾದ ಅಂದಾಜು 78 ಸಾವಿರ ಕೋಟಿ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರ ಸೆ.9 ರಂದು ಗೆಜೆಟ್ ಹೊರಡಿಸಿದೆ. ಸರ್ಕಾರದ ಕಾರ್ಯದರ್ಶಿ ಸಮಾನಾಂತರ ಅಧಿಕಾರಿಯನ್ನು ಆಯುಕ್ತರಾಗಿ ನೇಮಕ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು. ಗದಗ ನಗರದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಮತ್ತು ಅಪರಾಧ ಉತ್ಪತ್ತಿಯಿಂದ ಸ್ವತ್ತು ವಸೂಲಾತಿ ಮತ್ತು ಜಪ್ತಿಗೆ ಆಯುಕ್ತರ ನೇಮಕದ ಕುರಿತು ಗೆಜೆಟ್ ಹೊರಡಿಸಲಾಗಿದೆ.