ಕೆಎಸ್‌ರ‍್ಟಿಸಿಯಿಂದ ದಾವಣಗೆರೆ-ಜಗಳೂರು-ಉಜ್ಜಿನಿ-ಕಲಬುರಗಿ- ಬೀದರ್ ಮಾರ್ಗದಲ್ಲಿ ರಾಜಹಂಸ ಬಸ್ ಸೇವೆಯ ನೂತನ ಮಾರ್ಗಕ್ಕೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಅವರು ಬುಧವಾರ ಸಂಜೆ 5 ಗಂಟೆಗೆ ದಾವಣಗೆರೆ ಕೆಎಸ್‌ರ‍್ಟಿಸಿ ಬಸ್ ನಿಲ್ದಾಣದಲ್ಲಿ ನೂತನ ರಾಜಹಂಸ ಬಸ್‌ಗೆ ಚಾಲನೆ ನೀಡಿದರು. ಬಸ್ ದಾವಣಗೆರೆ, ಜಗಳೂರು, ಉಜ್ಜಿನಿ, ಕೊಟ್ಟೂರು, ಕೂಡ್ಲಗಿ, ಹೊಸಪೇಟೆ, ಸಿಂಧನೂರು, ಲಿಂಗಸೂರು, ಕಲಬುರಗಿ, ಹುಮನಾಬಾದ್ ಮಾರ್ಗವಾಗಿ ಬೀದರ್ ತಲುಪಲಿದ್ದು ಇದೇ ಮಾರ್ಗವಾಗಿ ಪ್ರತಿನಿತ್ಯ ವಾಪಸ್ ಮತ್ತೊಂದು ಬಸ್ ಸಂಚರಿಸಲಿದೆ.