ಇಂದು ಮಧ್ಯರಾತ್ರಿ ಚಂದ್ರಗ್ರಹಣ ಗೋಚರಿಸಲಿರುವ ಹಿನ್ನೆಲೆ ತಾಲೂಕಿನ ನಂದಿಗ್ರಾಮದ ಭೋಗ ನಂದೀಶ್ವರ ದೇವಾಲಯ ಮತ್ತು ನಂದಿಗಿರಿಧಾಮದ ಯೋಗ ನಂದೀಶ್ವರ ದೇವಾಲಯಸೇರಿದಂತೆ ಜಿಲ್ಲೆಯ ಎಲ್ಲಾ ದೇವಾಲಯಗಳನ್ನು ಭಾನುವಾರ ಸಂಜೆ 4:30 ಗಂಟೆಗೆ ಬಂದ್ ಮಾಡಿಲಾಗಿತ್ತು. ಇಂದು ಪೌರ್ಣಮಿ ಇಂದೆ ರಾತ್ರಿ 9.30ಕ್ಕೆ ಚಂದ್ರಗ್ರಹಣ ಇರುವ ಕಾರಣ ಪ್ರತಿ ದಿನವೂ ರಾತ್ರಿ 8:30ಕ್ಕೆ ಬಂದ್ ಮಾಡಲಾಗುತ್ತಿದ್ದ ದೇವಾಲಯಗಳ ಬಾಗಿಲುಗಳನ್ನ ಗ್ರಹಣದ ಅಂಗವಾಗಿ ಸಂಜೆ 4:30ಕ್ಕೆ ಮುಚ್ಚಲಾಗಿತ್ತು.ಎಂದಿನಂತೆ ಮರುದಿನ ಅಂದ್ರೆ ಸೋಮವಾರ ಬೆಳಿಗ್ಗೆ ಶುದ್ದೀಕರಣ ಮಾಡಿ ಬಳಿಕ ಬೆಳಗ್ಗೆ 9 ಗಂಟೆಯ ನಂತರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.