ಕಲಬುರಗಿ : ಮಾದಿಗ ಸಮಾಜದ ನಿರಂತರ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿ ಮಾಡಿ ಹೋರಾಟಗಾರರ ಕನಸ್ಸು ನನಸು ಮಾಡಿದೆ ಅಂತಾ ಮಾದಿಗ ಸಮಾಜ ವಿವಿಧ ಸಂಘಟನೆಗಳ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ನಾಟಿಕರ್ ಹೇಳಿದ್ದಾರೆ.. ಆ23 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೆವೆ.. ಒಂದು ಸಮುದಾಯದ ಕೂಗು ಸುಪ್ರೀಂ ಕೋರ್ಟ್ ತೀರ್ಪು ಬರೋವರೆಗೂ ನಡೆಯುತ್ತದೆಂದರೆ ಸಾಮಾನ್ಯವಾದ ಮಾತು ಅಲ್ಲ ಅಂತಾ ಚಂದ್ರಕಾಂತ ನಾಟಿಕರ್ ಹೇಳಿದ್ದಾರೆ.