ಬೆಂಗಳೂರು ಮೈಸೂರು ಹೆದ್ದಾರಿ ಡಿವೈಡರ್ ನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಚನ್ನಪಟ್ಟಣದ ಹನುಮಂತನಗರದ ಬಳಿ ಹೆದ್ದಾರಿ ಡಿವೈಡರ್ ನಲ್ಕಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಸೋಮವಾರ ರಾತ್ರಿ ಕಾಣಿಸಿದೆ ತಕ್ಷಣ ಸ್ಥಳೀಯ ಯುವಕರು ಹಿಡಿದು ರಕ್ಷಣೆ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ದಟ್ಟ ಅರಣ್ಯಕ್ಕೆ ಬಿಡುವಂತ ಕೆಲಸವನ್ನು ಮಾಡಲಾಗಿದೆ.