ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ವಿರಾಟ್ ನಗರ ಹವಂಬಾವಿಯಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ಬಾಲಕನೊಬ್ಬ ಬಲಗೈ ಕಳೆದುಕೊಂಡ ಘಟನೆ ನಡೆದಿದೆ.ವಿ.ಎಸ್. ವಿಶ್ವಜ್ಞಾಚಾರಿ ಎಂಬ ಬಾಲಕ ಮನೆಯ ಮೇಲ್ಯಾವಣಿಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶವಾಗಿ ಗಂಭೀರವಾಗಿ ಗಾಯಗೊಂಡನು. ತಕ್ಷಣವೇ ಟ್ರಾಮಾ ಕೇರ್ ಆಸ್ಪತ್ರೆಯಲ್ಲಿ ದಾಖಲಿಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಬಲಗೈ ಕತ್ತರಿಸಬೇಕಾಯಿತು.ಪೋಷಕರು ನೀಡಿದ ಮಾಹಿತಿಯ ಪ್ರಕಾರ, ಸರಿತಪ್ರಿಯ ಎಂಬವರು ಕಟ್ಟಿಸುತ್ತಿದ್ದ ಆರು ಅಂತಸ್ತಿನ ಮನೆಯಿಂದ ವಿದ್ಯುತ್ ವೈರ್‌ಗಳನ್ನು ನಿರ್ಲಕ್ಷ್ಯದಿಂದ ಹಾಕಿರುವುದರಿಂದ ಈ ದುರ್ಘಟನೆ ಸಂಭವಿಸಿದೆ. ಟ್ರಾನ್ಸ್‌ಮೀಟರ್ ಕೂಡ ಪಕ್ಕದಲ್ಲೇ ಇರುವುದರಿಂದ ಅಪಾಯ ಹೆಚ್ಚಾಗಿತ್ತು ಎಂದು ಅವರು ಆರ