ಬೆಳೆ ಹಾನಿ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಇಂದು ನಡೆಯಲಿರುವ ಸಭೆಯಲ್ಲಿ ಸಲ್ಲಿಸಲಾಗುವುದು ಎಂದು ತಹಸಿಲ್ದಾರ್ ಅಂಜನ್ ತಬಸುಮ್ ಅವರು ತಿಳಿಸಿದರು. ಬೆಳೆ ಹಾನಿ ಹಿನ್ನೆಲೆಯಲ್ಲಿ ತಾಲೂಕಿನ ಕುಮಾರ್ ಚಿಂಚೋಳಿಯಲ್ಲಿ ಶುಕ್ರವಾರ ಮಧ್ಯಾಹ್ನ 12:30 ಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಈ ವೇಳೆ ಪ್ರಮುಖರಾದ ವೈಜನಾಥ ದಳಪತಿ, ಮಡ್ಯಪ್ಪ ಹೈಬತ್ತಿ, ಬಾಬಾಖಾನ್ ಜಮಾದಾರ್ ಇದ್ದರು.