ಹಳಿಯಾಳ : ವಿಶ್ವ ಪ್ರಸಿದ್ಧ ಜೋಗ ಜಲಪಾತಕ್ಕೆ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಧರ್ಮಪತ್ನಿ ರಾಧಾ ಆರ್. ದೇಶಪಾಂಡೆಯವರೊಂದಿಗೆ ಶುಕ್ರವಾರ ಸಂಜೆ 4:00 ಸುಮಾರಿಗೆ ಭೇಟಿ ನೀಡಿ ಅಲ್ಲಿ ಅದ್ಭುತ ಕ್ಷಣಗಳನ್ನು ಕಳೆದರು. ಮಲೆನಾಡಿನ ಹಸಿರು ಹೊದಿಕೆಯ ನಡುವೆ ಭುವನವನ್ನು ಮೋಹಿಸುವ, ತೀವ್ರ ಮಳೆಯ ಹರಿವಿನಿಂದ ಉಕ್ಕಿ ಹರಿಯುವ ಶರಾವತಿ ನದಿ,ಜೋಗ ಜಲಪಾತದಲ್ಲಿ ತನ್ನ ಸಂಪೂರ್ಣ ಸೌಂದರ್ಯವನ್ನು ಪ್ರದರ್ಶಿಸುತ್ತಿರುವ ದೃಶ್ಯ ನೋಡಿ ದೇಶಪಾಂಡೆ ದಂಪತಿ ಪುಳಕಿತರಾದರು.