ಆ.23 ಮತ್ತು 24ರಂದು ವಿದ್ಯುತ್ ವ್ಯತ್ಯಯ ********** ಚಿತ್ರದುರ್ಗ:ಆ.22: ಚಿತ್ರದುರ್ಗ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ 23 ಮತ್ತು 24ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಚಿತ್ರದುರ್ಗ 220 ಕೆ.ವಿ ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ ಎಫ್-01 ಕಾಪರ್ ಮೈನ್ಸ್ 11 ಕೆ.ವಿ ಮಾರ್ಗ, ಐ.ಪಿ. ಸೆಟ್ ಮಾರ್ಗ ಹಾಗೂ ನಿರಂತರ ಜ್ಯೋತಿ ಮಾರ್ಗಗಳು, ಕುಂಚಿಗನಾಳ್, ಇಂಗಳದಾಳ್, ಕುರುಮರಡಿಕೆರೆ, ಕೆನ್ನೆಹಡಲು, ದೊಡ್ಡಸಿದ್ದವ್ವನಹಳ್ಳಿ, ಕ್ಯಾದಿಗೆರೆ ಮತ್ತು Confirmed ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ವಿದ್ಯುತ್ ಸರಬರಾಜು ಇರುವುದಿಲ್ಲ.