ಬಂಗಾರಪೇಟೆಯಲ್ಲಿ ನಿರ್ಮಿಸಿರುವಂತ ಕೋಮುಲ್ ಹಾಲು ಒಕ್ಕೂಟದ ಶಿಬಿರ ಕಚೇರಿಯು ಬಂಗಾರಪೇಟೆ ಹಾಗೂ ಕೆಜಿಎಫ್ ಎರಡು ತಾಲೂಕಿಗೆ ಸಂಬಂಧಿಸಿದ್ದು ಎಂದು ಕೋಮುಲ್ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಸೋಮವಾರ ತಿಳಿಸಿದರು.ಗ್ರಾಮದ ಸಮೀಪದ ದೊಡ್ಡಕಾರಿ ಗ್ರಾಮದ ತಮ್ಮ ತೋಟದ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು, ಎರಡು ವರ್ಷಗಳ ಹಿಂದೆ ಬಂಗಾರಪೇಟೆಯಲ್ಲಿ ಎರಡು ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಉಪಯೋಗವಾಗುವ ದೃಷ್ಟಿಯಿಂದ ಸುಮಾರು 03 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಿಬಿರ ಕಚೇರಿಯನ್ನು ನಿರ್ಮಾಣ ಮಾಡಲಾಗಿದೆ ಎಂದ್ರು