ಕಲಬುರಗಿ : ನಕಲಿ ರಿವೋಲ್ವರ್ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಫೋಸ್ ಕೊಟ್ಟಿದ್ದ ರೌಡಿಶೀಟರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರೋ ಘಟನೆ ನಡೆದಿದ್ದು, ಆ27 ರಂದು ಮಧ್ಯಾನ 1 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ರೌಡಿಶೀಟರ್ ಖಾಜಾಪಾಷಾ ಎಂಬಾತ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಕೈಯಲ್ಲಿ ನಕಲಿ ರಿವೋಲ್ವರ್‌ನ್ನ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಫೋಸ್ ಕೊಟ್ಟು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಹಿನ್ನಲೆಯಲ್ಲಿ ಮದೀನಾ ಕಾಲೋನಿ ನಿವಾಸಿ 24 ವರ್ಷದ ರೌಡಿಶೀಟರ್ ಖಾಜಾಪಾಶಾ ವಿರುದ್ಧ ನ್ಯೂ ರಾಘವೇಂದ್ರ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ಹುಡುಕಾಟ ನಡೆಸಿದ್ದಾರೆ..