Download Now Banner

This browser does not support the video element.

ಭಾಲ್ಕಿ: ಪಟ್ಟಣದಲ್ಲಿ ಹೈಟೆಕ್ ವಸತಿ ನಿಲಯ ಉದ್ಘಾಟನೆ

Bhalki, Bidar | Sep 2, 2025
ಭಾಲ್ಕಿ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು, ಭಾಲ್ಕಿ ಪಟ್ಟಣದ ಎಪಿಎಂಸಿ ಹತ್ತಿರ ಹೊಸದಾಗಿ ನಿರ್ಮಿಸಲಾದ ಹೈಟೆಕ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಹಾಗೂ ಆವರಣ ಗೋಡೆಯ ಉದ್ಘಾಟನೆಯನ್ನು ನೆರವೇರಿಸಿದರು. ಸುಮಾರು 2 ಕೋಟಿ 70 ಲಕ್ಷ ರೂ. ಅನುದಾನದೊಂದಿಗೆ ನಿರ್ಮಿಸಲಾದ ಈ ವಸತಿ ನಿಲಯವು ವಿದ್ಯಾರ್ಥಿಗಳಿಗೆ ಉತ್ತಮ ವಾಸ್ತವ್ಯ, ಸೌಲಭ್ಯಗಳು ಮತ್ತು ಸುರಕ್ಷಿತ ಪರಿಸರ ಒದಗಿಸಲು ಸಹಾಯಕವಾಗಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವ ದಿಶೆಯಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
Read More News
T & CPrivacy PolicyContact Us