ನಗರದ ಪ್ರತಿಷ್ಠಿತ ಅಗಡಿ ಓಣಿಯಲ್ಲಿ ಪ್ರಪ್ರಥಮ ಬಾರಿಗೆ ನವರಾತ್ರಿ ಉತ್ಸವದ ಅಂಗವಾಗಿ ಚಿಣ್ಣರೇ ಸಿದ್ಧಪಡಿಸಿದ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮ ಗುರುವಾರ ರಾತ್ರಿ 9ಕ್ಕೆ ನಡೆಯಿತು. ಸಾಮಾಜಿಕ ಕಾರ್ಯಕರ್ತ ಮಹೇಶ ಅಗಡಿ ಅವರ ಮಾರ್ಗದರ್ಶನ ದಲ್ಲಿ ಸಿದ್ಧಪಡಿಸಲಾದ ರಾವಣ ಪ್ರತಿಕೃತಿಗೆ ಸರ್ಕಾರಿ ಆಸ್ಪತ್ರೆ ಮುಖ್ಯ ಅರೋಗ್ಯ ಅಧಿಕಾರಿ ಡಾ. ನಾಗನಾಥ ಹುಲ್ಸೂರೆ ಪೂಜೆ ಸಲ್ಲಿಸಿದರು. ತನ್ವಿ ಎಂ ಅಗಡಿ ರಾವಣ ಪ್ರತಿ ಕೃತಿ ದಹನಕ್ಕೆ ಚಾಲನೆ ನೀಡಿದರು.