ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಗರ ಪಾಲಿಕೆಗಳ ಆಯುಕ್ತರ ನಿರ್ದೇಶನದಂತೆ, ನಾಗರೀಕರ ಹಿತದೃಷ್ಟಿಯಿಂದ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಿಂದ ಸ್ವಚ್ಛತಾ ಅಭಿಯಾನ ಹಾಗೂ ಅಡೆತಡೆಯಿಲ್ಲದ ಮತ್ತು ಪಾದಚಾರಿಗಳಿಗೆ ಅನುಕೂಲಕರ ಪಾದಚಾರಿ ಮಾರ್ಗ ನಿರ್ಮಿಸುವ ಉದ್ದೇಶದಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವ್ಯಾಪ್ತಿ, ದೊಮ್ಮಲೂರು ಫ್ಲೈ ಓವರ್ ಬಳಿ, ಚಾಮರಾಜಪೇಟೆ ವ್ಯಾಪ್ತಿ, ದೊಮ್ಮಲೂರು ಮೊದಲನೇ ಹಂತ ವ್ಯಾಪ್ತಿ, ಗಾಂಧಿನಗರ, ಮೆಜೆಸ್ಟಿಕ್ ಸುತ್ತಲಿನ ಪ್ರದೇಶ, ಇಂದಿರಾನಗರದ 80 ಅಡಿ ರಸ್ತೆ (ವಿವೇಕಾನಂದ ಮೆಟ್ರೋ ನಿಲ್ದಾಣದ ಕಡೆ) ಹಾಗೂ ವಸಂತನಗರ ಉಪವಿಭಾಗ ವ್ಯಾಪ್ತಿ