ನವಲಗುಂದ ತಾಲೂಕಿನ ವಿವಿಧೆಡೆ ಸಚಿವ ಸಂತೋಷ ಲಾಡ್ ಹಾಗೂ ಅಧಿಕಾರಿಗಳ ತಂಡ ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಶನಿವಾರ ನವಲಗುಂದ ತಾಲೂಕಿನ ನವಲಗುಂದ ಪಟ್ಟಣ, ತಡಹಾಳ, ಶಿರಕೋಳ್ಳ, ದೊಡ್ಡಹಳ್ಳ, ಬೆಣ್ಣೆಹಳ್ಳ ಪ್ರದೇಶದಲ್ಲಿ ಹಾನಿಯಾದ ರೈತರ ಜಮೀನುಗಳ ಕುರಿತು ಮಾಹಿತಿ ಕಲೆ ಹಾಕಿದರು. ಇನ್ನೂ ರೈತರಿಗೆ ಸೂಕ್ತ ಪರಿಹಾರ ಬಿಡುಗಡೆಯ ಭರವಸೆಯನ್ನು ನೀಡಿದರು. ಈ ವೇಳೆ ಶಾಸಕ ಎನ್ ಎಚ್ ಕೋನರಡ್ಡಿ ಇದ್ದರು.