ಗಣಪತಿ ವಿಸರ್ಜನೆ ಮಾಡುವ ವೇಳೆ ಕಾಲು ಜಾರಿ ಬಿದ್ದು ನಾಲೆಯಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿರುವಾಗ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆ ಹೊನ್ನೂರಿನ ಕುರುಬರ ವಿಠಲಪುರ ಗ್ರಾಮದಲ್ಲಿ ನಡೆದಿದೆ. ಇಟ್ಟಿಗೆ ಹಳ್ಳಿಯ 10 ವರ್ಷದ ಕುಶಾಲ್ ಮೃತ ಬಾಲಕ ಎಂದು ತಿಳಿದುಬಂದಿದ್ದು,ಪುಟ್ಟ ಮಕ್ಕಳುಗಳೇ ಸೇರಿ ಗಣಪತಿ ಮಾಡಿ ವಿಸರ್ಜನೆ ಮಾಡಲು ಹೋದಾಗ ಭದ್ರಾ ನಾಲೆಯಲ್ಲಿ ಕಾಲು ಜಾರಿ ಕುಶಾಲ್ ಬಿದ್ದಿದ್ದಾನೆ. ಸ್ಥಳೀಯರು ಹುಡುಕಾಟ ನಡೆಸಿ ನಾಲೆಯಿಂದ ಬಾಲಕನ ಮೃತ ದೇಹ ಹೊರಗೆ ತೆಗೆದಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬುಧವಾರ ಬೆಳಕಿಗೆ ಬಂದಿದೆ.ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.