ತಾಲೂಕಿನ ಕುಡುಪಲಿ ಗ್ರಾಮಕ್ಕೆ ಮಾಜಿ ಸಚಿವ ಬಿಸಿ ಪಾಟೀಲ್ ಭೇಟಿ ಅನಾರೋಗ್ಯಕ್ಕೆ ತುತ್ತಾದ ಬಿಜೆಪಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದರು. ಬುಧವಾರ ಮಧ್ಯಾಹ್ನ ಕುಡಪಲಿ ಗ್ರಾಮದ ಬಿಜೆಪಿ ಕಾರ್ಯಕರ್ತ ಮಲ್ಲಿಕಾರ್ಜುನ ಆರೋಗ್ಯ ವಿಚಾರಿಸಿದರು. ನಂತರ ಇತ್ತೀಚೆಗೆ ನಿಧನರಾದ ಮಹದೇವಪ್ಪ ಬೆನಕಣ್ಣನವರ ಅವರ ಮನೆಗೆ ಭೇಟಿ ನೀಡಿದ ಬಿಸಿ ಪಾಟೀಲ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಗ್ರಾಮ ಪಂಚಾಯಿತಿ ಹಾಲಿ ಮಾಜಿ ಅಧ್ಯಕ್ಷರು, ಗ್ರಾಮಸ್ಥರು ಹಾಜರಿದ್ದರು.