ಪಂಜಾಬ್ ನ ಜಲಂಧರ್ ನಲ್ಲಿ ವೀರಮರಣ ಹೊಂದಿದ್ದ ಹುತಾತ್ಮ ಯೋಧನ ಪಾರ್ಥೀವ ಶರೀರವು ವಿಮಾನದ ಮೂಲಕ ಬೆಳಗಾವಿಗೆ ಬಂದು, ಅಲ್ಲಿಂದ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯ ಒಳಗೆ ಸ್ವಗ್ರಾಮ ಹಿರೇಕೊಪ್ಪಕ್ಕೆ ತಲುಪಲಿದೆ. ಈ ವೇಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಗೌರವ ನಮನಗಳನ್ನು ವೀರ ಯೋಧನಿಗೆ ಅರ್ಪಿಸಲಿದ್ದಾರೆ ಅಂತ ಬಸಲಿಂಗಪ್ಪ ಮುಂಡರಗಿ ತಿಳಿಸಿದರು.