ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುಮಾರು ಹತ್ತು ಸಾವಿರ ಕಿಲೋಮೀಟರ್ ಸೈಕಲ್ ಯಾತ್ರೆ ಹಮ್ಮಿಕೊಂಡಿರುವ ಉತ್ತರ ಪ್ರದೇಶದ ಯುವ ಮೋರ್ಚಾ ಅಧ್ಯಕ್ಷ ದೀಪಕ್ ಶರ್ಮ ಅವರ ಸೈಕಲ್ ಯಾತ್ರೆ ಸುಖಮಯವಾಗಿರಲಿ ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್ ನಾಗೇಂದ್ರ ಹಾಗೂ ಗ್ರಾಮಾಂತರ ಅಧ್ಯಕ್ಷರು ಸೇರಿ ಸನ್ಮಾನಿಸಿ ಅವರನ್ನು ಗೌರವಿಸಿದ್ದಾರೆ ಆತ್ಮ ನಿರ್ಭರ ಭಾರತ ಹಾಗೂ ಆಪರೇಷನ್ ಸಿಂಧೂರ ಯಶಸ್ವಿ ಯಾದ ಹಿನ್ನೆಲೆ ಸದೃಢ ಭಾರತಕ್ಕಾಗಿ ಉತ್ತರಪ್ರದೇಶದ ಯುವ ಮೋರ್ಚಾ ಅಧ್ಯಕ್ಷ ದೀಪಕ್ ಶರ್ಮ ಅವರು ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದು ಇಂದು ಅವರು ಮೈಸೂರಿಗೆ ಆಗಮಿಸಿದ್ದರು ಅವರನ್ನು ಮೈಸೂರು ನಗರ ಬಿಜೆಪಿ ವತಿಯಿಂದ ಅದ್ದೂರಿಯಾಗಿ ಬರಮಾಡಿಕೊಂಡಿದ್ದು ಮುಂದಿನ ಪ್ರಯಾಣ ಸುಖಮಯವಾಗಿರಲಿ ಎಂದು ಬಿಳ್ಕೊಡುಗೆ ನೀಡಿದ್ದಾರೆ