ಪಟ್ಟಣದಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ ಪಥ ಸಂಚಲನ. ಪಟ್ಟಣದಲ್ಲಿ ಕಳೆದ 9 ದಿನಗಳಿಂದ ಗಣೇಶ ಹಬ್ಬ ಆಚರಣೆ ಮತ್ತು ಶುಕ್ರವಾರ ದಿನ ಇದ್ ಮಿಲಾದ್ ಆಚರಣೆ ಹಾಗೂ ಸರಣಿ ಉರುಸು ಕಾರ್ಯಕ್ರಮಗಳು ಜರಗುತ್ತಿರುವದರಿಂದ ಯಾವದೇ ತರಹದ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಗೋಕಾಕ ಡಿ ಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ಮತ್ತು ಘಟಪ್ರಭಾ ಇನ್ಸಪೇಕ್ಟರ ಹಸನ ಮುಲ್ಲಾ ಸೇರಿದಂತೆ ಹುಕ್ಕೇರಿ ಪೋಲಿಸ್ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಸುಮಾರು 60 ಜನ ಪೋಲಿಸ್ ವಿಷೇಶ ಸೇನಾಪಡೆ ಗುರುವಾರ ಪಟ್ಟಣದಲ್ಲಿ ಪಥ ಸಂಚಲನೆ ನಡೆಸಿ ಜನರಲ್ಲಿ ಜಾಗ್ರತೆ ಮೂಡಿಸಿದರು.