ಮದ್ದೂರು ಘಟನೆ ಖಂಡಿಸಿ ವಿಹಿಂಪ, ಬಜರಂಗದಳದಿಂದ ಪ್ರತಿಭಟನೆ. ಕಿಡಿಗೇಡಿಗಳ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮಕೈಗೊಳ್ಳು ಒತ್ತಾಯ. ದೊಡ್ಡಬಳ್ಳಾಪುರ :ಮದ್ದೂರು, ಸಾಗರ ಸೇರಿದಂತೆ ಅನೇಕ ಸ್ಥಳಗಳಲ್ಲಿ ಗಣೇಶ ವಿಸರ್ಜನೆ ಹಾಗೂ ಶೋಭಾಯಾತ್ರೆಯ ಮೇಲೆ ಕಲ್ಲುತೂರಾಟ ಮಾಡಿರುವ ಘಟನೆ ಸಂಭವಿಸಿದೆ. ಇಂತಹ ಕೃತ್ಯಕ್ಕೆ ಮುಂದಾದ ಕಿಡಿಗೇಡಿಗಳ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಜರಂಗದಳದ ವಿಭಾಗ ಸಂಯೋಜಕ ನರೇಶ್ ರೆಡ್ಡಿ ಅಗ್ರಹಿಸಿದರು.