ಆಗಸ್ಟ್ 25, ಸೋಮವಾರ ಮಧ್ಯಾಹ್ನ 1 ಗಂಟೆಗೆ ಕಂಪ್ಲಿ ಪಟ್ಟಣದ 4ನೇ ವಾರ್ಡ್ ಬಸವೇಶ್ವರ ನಗರದ ಕೆಂಚಮ್ಮ ದೇವಸ್ಥಾನ ಪಕ್ಕದಲ್ಲಿ ಇರುವ ಪುರಾತನ ಕಾಲದ ಬಾವಿಯೂ ಸುಮಾರು ವರ್ಷಗಳಿಂದ ಪಾಳು ಬಿದ್ದಿದ್ದು, ಸ್ವಚ್ಚತೆ ಮಾಡುವಂತೆ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಸಂಘದ ವತಿಯಿಂದ ಪುರಸಭೆಗೆ ಆಗ್ರಹಿಸಿದ್ದಾರೆ.ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ರವರು ಮಾತನಾಡಿ, ಆದಷ್ಟು ಬೇಗ ಬಾವಿಯನ್ನು ಸ್ವಚ್ಚಗೊಳಿಸಿಕೊಡಲಾಗುವುದು, ಪುರಾತನ ಸ್ಥಳ, ಬಾವಿ, ಶಾಸನಗಳನ್ನು ಸಂರಕ್ಷಣೆ ನಮ್ಮೇಲ್ಲಾರ ಹೊಣೆ ಎಂದರು