ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಮಂಗಳವಾರ ಸಾಗರ ಎಎಸ್ಪಿ ಬೆನಕ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ರೂಟ್ ಮಾರ್ಚ್ ನಡೆಸಲಾಗಿದೆ.ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ರೂಟ್ ಮಾರ್ಚ್ ಮಾಡಲಾಗಿದೆ ಸಾಗರದ ಎಸ್ ಎನ್ ನಗರದಿಂದ ಪ್ರಾರಂಭವಾದ ರೂಟ್ ಮಾರ್ಚ್ ಅವಿನಹಳ್ಳಿ ರಸ್ತೆ,ಮಹಾಲಕ್ಷ್ಮಿ ರೈಸ್ ಮಿಲ್, ಕಬರ ಸ್ಥಾನ, ಉಪ್ಪರಕೇರಿ ಸರ್ಕಲ್ ಸೇರಿದಂತೆ ವಿವಿಧ ಬೀದಿಗಳಲ್ಲಿ ರೂಟ್ ಮಾರ್ಚ್ ನಡೆಸಲಾಯಿತು ಸದರಿ ರೂಟ್ ಮಾರ್ಚ್ ನಲ್ಲಿ ಸಾಗರ ತಾಲೂಕಿನ ವಿವಿಧ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಸ್ಎಆಫ್ ಮತ್ತು ಆರ್ಎಎಫ್ ನ ಪೊಲೀಸ್ ಅಧಿಕಾರಿಗಳು,ಸಿಬ್ಬಂದಿಗಳು ಭಾಗವಹಿಸಿದರು.