*ಹತ್ತಾರು ಹಳ್ಳಿಗಳಿಗೆ ಜೀವ ಸೆಲೆಯಾಗಿರುವ ಗುಂಡ್ಲುರು ಕೆರೆ ಅವಸಾನದತ್ತ* ಚಿತ್ರದುರ್ಗ:-ಕೆರೆಗಳು ಪರಿಸರ ಸಮತೋಲನವನ್ನು ಕಾಪಾಡುತ್ತ ಜೀವ ವೈವಿಧ್ಯ ಪ್ರಭೇದಗಳಿಗೆ ಆಸರೆ ನೀಡುವ ಆಶ್ರಯ ತಾಣ. ಕೆರೆಗಳು ಸಮೃದ್ಧಿಯಾದರೆ ಊರು ಸುಭಿಕ್ಷವಾಗಿರುತ್ತದೆ ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯ,ಕಸ ಹಾಗೂ ಕೈಗಾರಿಕಾ ತ್ಯಾಜ್ಯ, ಕೆರೆಯಲ್ಲಿನ ಮಣ್ಣು ಅಕ್ರಮವಾಗಿ ಕಬಳಿಕೆ ಮಾಡಿದ್ದರ ಪರಿಣಾಮ ಹತ್ತಾರು ಹಳ್ಳಿಗಳಿಗೆ ಜೀವ ಸೆಲೆಯಾಗಿರುವ ಇಲ್ಲೊಂದು ಕೆರೆಯು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಅವಸಾನದತ್ತ ಸಾಗುತ್ತಿದೆ.