ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ದಾಳಿ ನಡೆಸಿರುವ ಹುಮ್ನಾಬಾದ್ ಪೊಲೀಸರು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದ ಮೇರೆಗೆ ಪಿಎಸ್ಐ ಸುರೇಶಕುಮಾರ ಚೌಹಾಣ್ ಹಾಗೂ ಸಿಬ್ಬಂದಿ ಸೇರಿ ದಾಳಿ ನಡೆಸಿ 4ಜನ ಆರೋಪಿತರನ್ನು ಬಂಧಿಸಿ, ₹2450ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.