ಇವಿಎಂ ಮೇಲೆ ನಮಗೆ ನಂಬಿಕೆಯೇ ಹೋಗಿದೆ,ಪ್ರಧಾನಿ ಮೋದಿ ಅವರು ಬ್ಯಾಲೆಟ್ ಪೇಪರ ತರ್ತೆನೆ ಎಂದಿದ್ದರೆ ಅವರಿಗೊಂದು ದೊಡ್ಡ ನಮಸ್ಕಾರ ಮಾಡುತ್ತಿದ್ದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಅವರು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು,ಇವಿಎಂ ಮೇಲೆ ನಮಗೆ ನಂಬಿಕೆಯೇ ಹೋಗಿದೆ. ಟೆಕ್ನಾಲಜಿಯನ್ನ ದುರುಪಯೋಗಪಡೊಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ ಜನರಿಗೂ ನಂಬಿಕೆ ಹೋಗಿದೆ.ಪ್ರಜಾಪ್ರಭುತ್ವದ ಮೇಲೆ ಅಪನಂಬಿಕೆ ಬಂದಾಗ ಬ್ಯಾಲೆಟ್ ಪೇಪರ ತರ್ತೇನೆ ಅಂತ ಒಂದು ಮಾತು ಹೇಳುತ್ತಿಲ್ಲ.ಪ್ರಧಾನಿ ಮೋದಿ ಅವರು ಬ್ಯಾಲೆಟ್ ಪೇಪರ್ ತರ್ತೆನೆ ಅಂದ್ರೆ ಅವರಿಗೆ ದೊಡ್ಡ ನಮಸ್ಕಾರ ಎಂದರು.