ಚಿತ್ರದುರ್ಗ ಸಹಕಾರಿ ಯೂನಿಯನ್‌ನ 62ನೇ ವಾರ್ಷಿಕ ಮಹಾ ಸಭೆ ಇತ್ತೀಚಿಗೆ ನಗರದ ದಾವಣಗೆರೆ ರಸ್ತೆಯ ಜೆ.ಎಂ.ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಿತು. ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಕೋಗುಂಡೆ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘಗಳ ಲಾಭದಲ್ಲಿ ಶೇ.2% ರಷ್ಟು ಸಹಕಾರ ಶಿಕ್ಷಣ ನಿಧಿ ಪಾವತಿಸುತ್ತಿರುವ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಚಿತ್ರದುರ್ಗ ತಾಲ್ಲೂಕಿನ ಎಸ್.ಜೆ.ಎಂ. ಪತ್ತಿನ ಸಹಕಾರ ಸಂಘ, ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ, ಕಡ್ಲೆಗುದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಪದಾಧಿಕಾರಿಗಳಿದ್ದರು