ಧರ್ಮಸ್ಥಳ ಪ್ರಕರಣಕ್ಕೆ ಚಿತ್ರದುರ್ಗದಲ್ಲಿ ಶನಿವಾರ ಸಂಜೆ 4 ಗಂಟೆಗೆ ಸಚಿವ ಡಿ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತ್ನಾಡಿದ ಅವರು ಸತ್ಯ ಮೇವ ಜಯತೆ, ಸತ್ಯ ಯಾವುದೇ ಕಾರಣಕ್ಕೂ ಮುಚ್ಚಿಡಲು ಅಸಾಧ್ಯ ಎಂದಿದ್ದಾರೆ. ಅಲ್ಲದೆ ಯಾವುದೇ ವಿಚಾರದಲ್ಲೂ ಸತ್ಯ ಹೊರಗೆ ಬಂದೇ ಬರುತ್ತದೆ,ಧರ್ಮಸ್ಥಳ ವಿಚಾರದಲ್ಲಿ ಇಂದು ಸಾಬೀತಾಗಿದೆ, ಇನ್ನೂ ಕೇವಲ ಹಿಂದು ಮಾತ್ರವಲ್ಲದೇ ಜಾತಿ ರಹಿತ ಭಕ್ತರು ಧರ್ಮಸ್ಥಳಕ್ಕೆ ಬರುತ್ತಾರೆ ಎಂದರು. ಇಂಥ ಸ್ಥಳಕ್ಕೆ ಷಡ್ಯಂತ್ರ ಮಾಡಿ ಮಸಿ ಬಳಿಯುವ ಕೆಲಸ ಮಾಡಿದ್ದಾರೆ, ವೀರೇಂದ್ರ ಹೆಗ್ಗಡೆ ಅವರಿಗೆ ಪದ್ಮಶ್ರೀ ಕೊಟ್ಟಿದ್ದಾರೆ, ಭಾರತ ರತ್ನ ಕೊಟ್ಟರೂ ತಪ್ಪಿಲ್ಲ, ಅಷ್ಟೋಂದು ಸೇವೆ ಮಾಡಿದ್ದಾರೆ ಅಂದರು.